ರಾಮನಗರ RAMANAGARA
Financial Year   
ಜಿಲ್ಲೆಯ ಬಗ್ಗೆ
ರಾಮನಗರ ಕರ್ನಾಟಕದ ಒಂದು ಜಿಲ್ಲಾ ಕೇಂದ್ರ.ಈ ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದ ರಾಮನಗರ ೨೦೦೭ರಲ್ಲಿ ಪ್ರತ್ಯೇಕ ಜಿಲ್ಲೆಯಾಯಿತು.ರಾಮನಗರವು ರೇಷ್ಮೆ ನಗರವೆಂದು ಖ್ಯಾತಿಗಳಿಸಿದೆ.ರಾಮನಗರ ಜಿಲ್ಲೆಯಲ್ಲಿನ ತಾಲ್ಲೂಕುಗಳೆಂದರೆ ಚನ್ನಪಟ್ಟಣ,ರಾಮನಗರ,ಮಾಗಡಿ,ಕನಕಪುರ. ಕರ್ನಾಟಕಕ್ಕೆ ಮೂವರು ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆಯಾಗಿದೆ.ರಾಮನಗರ ಜಿಲ್ಲೆಯ ಪ್ರಮುಖ ಸ್ಥಳಗಳೆಂದರೆ ಜಾನಪದ ಲೋಕ ,ಕೆಂಗಲ್,ದೊಡ್ಡ ಮಳೂರು. ರಾಮನಗರ ಮಿನಿ ವಿಧಾನ ಸೌಧ ವನ್ನು ಹೊಂದಿದೆ. ಹೆಚ್ಚಾಗಿ ಬೆಟ್ಟ ಗುಡ್ಡಗಳಿಂದ ಕೂಡಿದ ಪ್ರದೇಶವಾಗಿದೆ.ರಾಮನಗರ ಹಿಂದಿಯ ಶೋಲೆ ಖ್ಯಾತಿಯ ರೇಷ್ಮೆ ಸೀಮೆ.ರೇಷ್ಮೆ ನಗರ ರಾಮನಗರ ಬೆಂಗಳೂರಿನಿಂದ ೪೭ ಕಿಲೋಮೀಟರು ದೂರದಲಿದ್ದು,ನೈರುತ್ಯ ದಿಕ್ಕಿನಲ್ಲಿದೆ. ಇದು ರಾಮನಗರ ಜಿಲ್ಲೆಯ ಜಿಲ್ಲಾಕೇಂದ್ರ. ಕರ್ನಾಟಕ ರಾಜ್ಯದ ಇತರೆ ಭಾಗಗಳಂತೆ ಇದೂ ಕೂಡ ಗಂಗ,ಚೋಳ,ಹೊಯ್ಸಳ ಹಾಗು ಮೈಸೂರು ರಾಜರ ಆಳ್ವಿಕೆಗೆ ಒಳಪಟ್ಟಿತ್ತು ಆದರೆ ಈ ಪಟ್ಟಣ ಏಕಾಏಕಿ ಪ್ರಸಿದ್ದಿಗೆ ಬಂದದ್ದು ಸುಮಾರು 70ರ ದಶಕದಲ್ಲಿ ಇಲ್ಲಿ ನಡೆದ ಶೋಲೆ ಚಲನ ಚಿತ್ರದ ಚಿತ್ರೀಕರಣದಿಂದ.ರಾಮನಗರವು,ಶಿವರಾಮಗಿರಿ, ಸೋಮಗಿರಿ, ಕೃಷ್ಣಗಿರಿ, ಯತಿರಾಜಗಿರಿ, ರೇವಣ ಸಿದ್ದೇಶ್ವರ, ಸಿಡಿಲಕಲ್ಲು ಹಾಗು ಜಲ ಸಿದ್ದೇಶ್ವರ ಎಂಬ 7 ಭವ್ಯ ಬೆಟ್ಟಗಳಿಂದ ಸುತ್ತುವರಿದಿದೆ. ಇಲ್ಲಿ ರೇಷ್ಮೆಯನ್ನು ಹೆಚ್ಚಾಗಿ ಬೆಳೆಯುವುದರಿಂದ ಈ ಊರು ರೇಷ್ಮೆ ನಗರವೆಂದೂ ಹೆಸರುವಾಸಿ. ವಿಶ್ವ ವಿಖ್ಯಾತ ಮೈಸೂರು ರೇಷ್ಮೆ ಸೀರೆಗಳನ್ನು ರಾಮನಗರದ ರೇಷ್ಮೆಯನ್ನು ಬಳಸಿಯೇ ನೇಯಲಾಗುತ್ತದೆ.ಪ್ರಕೃತಿ ಪ್ರೇಮಿಗಳಿಗೆ ಖುಷಿ ಕೊಡುವ ವಿಚಾರವೆಂದರೆ ಇಲ್ಲಿರುವ ಬೆಟ್ಟಗಳು ಈಗ ಅಳಿವಿನಂಚಿನಲ್ಲಿರುವ ಹಳದಿ ಕುತ್ತಿಗೆಯ ಬುಲ್ ಬುಲ್ ಹಾಗು ಉದ್ದ ಕೊಕ್ಕಿನ ರಣಹದ್ದುಗಳಿಗೆ ಮನೆಯಾಗಿರುವುದು. ಇಲ್ಲೇ ಜಾನಪದ ಲೋಕವಿದ್ದು ಕರ್ನಾಟಕದ ಜಾನಪದ ಕಲೆ ಹಾಗು ಸಂಸೃತಿಗೆ ಸಂಬಂದ್ದಪಟ್ಟ ಸಣ್ಣ ವಸ್ತು ಸಂಗ್ರಹಾಲಯವನ್ನು ಇಲ್ಲಿ ನೋಡಬಹುದು.ಈ ಪ್ರದೇಶ ಬೆಟ್ಟಗಳಿಂದ ಸುತ್ತುವರಿದಿದ್ದು ಪರ್ವತಾರೋಹಣ ಪ್ರಿಯರಿಗೆ ಹೇಳಿ ಮಾಡಿಸಿದ ತಾಣವಾಗಿದೆ ಹಾಗೂ ಇದು ಈ ಪ್ರದೇಶದ ಪ್ರವಾಸೋದ್ಯಮಕ್ಕೂ ಆಸರೆಯಾಗಿದೆ. ರಾಮನಗರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವುದರಿಂದ ಇಲ್ಲಿಗೆ ಈ ಎರಡೂ ನಗರಗಳಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.
ಇತ್ತೀಚಿನ ಅಪ್ಡೇಟ್

ರಾಮದೇವರ ಬೆಟ್ಟ ರಾಮನಗರ ಜಿಲ್ಲೆ



[X]