ಹಾವೇರಿ HAVERI
Financial Year   
ಜಿಲ್ಲೆಯ ಬಗ್ಗೆ
ಅವಿಭಾಜಿತ ಧಾರವಾಡ ಜಿಲ್ಲೆಯಿಂದ 1997 ರಲ್ಲಿ ಹಾವೇರಿ ಜಿಲ್ಲೆಯಾಗಿ ಉದಯವಾಯಿತು. ಜಿಲ್ಲೆಯು 4,823 ಚದರ ಕಿ.ಮೀ ವಿಸ್ತೀರ್ಣ ಹೊಂದಿರುತ್ತದೆ. ಜಿಲ್ಲೆಯ ಒಟ್ಟು ಜನಸಂಖ್ಯೆ 15,97,668 [2011 ರ ಜನಗಣತಿ ಪ್ರಕಾರ] ಬಹುತೇಕ ಕೃಷಿಕ ಕುಟುಂಬವನ್ನು ಹೊಂದಿರುವ ಜಿಲ್ಲೆ ಇದಾಗಿದೆ. ಜಿಲ್ಲೆಯಲ್ಲಿ ತುಂಗಭದ್ರ, ವರದಾ, ಕುಮುದ್ವತಿ ನದಿಗಳು ಹರಿಯುತ್ತವೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಮೆಣಸು, ಗೋವಿನಜೋಳ, ಹತ್ತಿ, ಭತ್ತ, ಕಬ್ಬು ಇತ್ಯದಿ ಪ್ರಮುಖ ಬೆಳೆಗಳಾಗಿವೆ. ಜಿಲ್ಲೆಯು ದಾರ್ಶನಿಕ ಇತಿಹಾಸವನ್ನು ಹೊಂದಿದ್ದು, ಪೂರಾಣ ಪ್ರಸಿದ್ದ ವ್ಯಕ್ತಿಗಳ ತವರು ಇದಾಗಿದೆ. ಸರ್ವಜ್ಞ, ಶಿಶುನಾಳ ಶರೀಫ,ಪುಟ್ಟರಾಜ ಗವಾಯಿಗಳು, ಮೈಲಾರ ಮಹದೇವಪ್ಪ, ಹೊಸಮನಿ ಸಿದ್ದಪ್ಪ ಹೀಗೆ ಹಲವಾರು ಮಹಾನ್ ಪುರಷರ ತವರು ಇದಾಗಿದೆ. ಜಿಲ್ಲೆಯೂ ಬಯಲುಸೀಮೆ ಹಾಗೂ ಮಲೆನಾಡು ಎರಡನ್ನು ಹೊಂದಿರುವ ವಿಶಿಷ್ಟ ಜಿಲ್ಲೆ ಇದಾಗಿದೆ. ಜಿಲ್ಲೆಯಲ್ಲಿ ಅಭಯಾರಣ್ಯಗಳು ಕೃಷ್ಣಮೃಗ ತಾಣವನ್ನು ಸಹ ಜಿಲ್ಲೆಯಲ್ಲಿ ಕಾಣಬಹುದಾಗಿದೆ.ಜಿಲ್ಲೆಯಲ್ಲಿನ ಯಾಲಕ್ಕಿ ಮಾಲೆ ಹಾಗೂ ಸವಣೂರು ಖಾರಾ ಸುಪ್ರಸಿದ್ದವಾಗಿರುವುದು ಜಿಲ್ಲೆಯ ಹೆಮ್ಮೆಯ ವಿಷಯವಾಗಿದೆ.
ಇತ್ತೀಚಿನ ಅಪ್ಡೇಟ್

ಪುರಸಿದ್ದೇಶ್ವರ ದೇವಸ್ಥಾನ[X]