ಕಲಬುರಗಿ KALABURAGI
Financial Year   
ಜಿಲ್ಲೆಯ ಬಗ್ಗೆ
ಗುಲ್ಬರ್ಗ ಜಿಲ್ಲೆಯು ಕರ್ನಾಟಕ ರಾಜ್ಯದ ಜಿಲ್ಲೆಗಳಲ್ಲಿ ಒಂದು.ಈ ಜಿಲ್ಲೆಯ ಜನಸಂಖ್ಯೆ 2011 ರ ಜನಗಣತಿಯ೦ತೆ 25,64,892.ಇದರಲ್ಲಿ 13,07,061, ಪುರು‍ಷ ಮತ್ತು 12,57,831 ಮಹಿಳಿಯರು ಆಗಿದ್ದಾರೆ. ಗುಲ್ಬರ್ಗ ಜಿಲ್ಲೆಯಲ್ಲಿ 7 ತಾಲೂಕುಗಳಿವೆ. ಇಲ್ಲಿನ ಹವಾಮಾನ ಬೇಸಗೆಯಲ್ಲಿ 46 ಡಿಗ್ರಿಗಳವರೆಗೆ ಹೋಗಬಲ್ಲದು; ಚಳಿಗಾಲದಲ್ಲಿ ಕನಿಷ್ಠ ತಾಪಮಾನ ಸಾಮಾನ್ಯವಾಗಿ 15 ಡಿಗ್ರಿ ಇರುವುದು.ಇಲ್ಲಿರುವ ಎರಡು ಮುಖ್ಯ ನದಿಗಳೆ೦ದರೆ ಕೃಷ್ಣಾ ಮತ್ತು ಭೀಮಾ ನದಿ.ಈ ಜಿಲ್ಲೆಯನ್ನು ತೋಗರಿ ಕಣಜ ಎಂದು ಕರೆಯುತ್ತಾರೆ.ಯಾದಗೀರ್ ಕೂಡ ಗುಲ್ಬರ್ಗ ಜಿಲ್ಲೆಯ ಒ೦ದು ತಾಲೂಕ ಇತ್ತು,ಆದರೆ 10 April 2010 ಕ್ಕೆ ಯಾದಗೀರ್,ಜಿಲ್ಲೆಯಾಗಿ ಘೊಶಿತವಾಯಿತು. ಯಾದಗೀರ್ ಜಿಲ್ಲೆಯಲ್ಲಿ ಸುರಪುರ ಹಾಗೂ ಶಹಾಪುರ ತಾಲೂಕೂಗಳನ್ನು ಸೆರಿಸಲಾಗಿದೆ. ಗುಲ್ಬರ್ಗ ಜಿಲ್ಲೆ ಬೆಂಗಳೂರಿನಿ೦ದ 612 ಕಿಮೀ ದೂರದಲ್ಲಿದ್ದು ಬಿಜಾಪುರ, ಹೈದರಾಬಾದ್, ಬೀದರ್ ಮೊದಲಾದ ಜಿಲ್ಲೆಗಾಗಿ ರಸ್ತೆ ಸ೦ಪರ್ಕ ಹೊ೦ದಿದೆ.ಬೀದರ್ -ಶ್ರಿರಂಗಪಟ್ಟಣ ರಾಜ್ಯ ಹೆದ್ದಾರಿಯ ಫಲವಾಗಿ ಇಂದು ಬೆಂಗಳೂರು-ಗುಲ್ಬರ್ಗ ಮಧ್ಯೆ ರಸ್ತೆ ಸಂಚಾರ ಸುಗಮವಾಗಿದೆ. ದಕ್ಷಿಣ ಭಾರತದಿ೦ದ ಉತ್ತರ ಭಾರತಕ್ಕೆ ಸಾಗುವ ರೈಲುಗಳು ಗುಲ್ಬರ್ಗದ ಮೂಲಕ ಹಾದುಹೊಗುತ್ತವೆ. ಹವಾಮಾನದ ದೃಷ್ಟಿಯಿ೦ದ ಗುಲ್ಬರ್ಗದಲ್ಲಿ ಸಾಕಷ್ಟು ಒಣ ಹವೆ ಇದೆ. ಸರಾಸರಿ ವಾರ್ಷಿಕವಾಗಿ ಇಲ್ಲಿ ಸುಮಾರು 75 ಸೆ.ಮೀ.ಮಳೆಯಾಗುತ್ತದೆ. ಇಡೀ ಜಿಲ್ಲೆ ದಖನ್ ಪ್ರಸ್ತಭೂಮಿಯ ಮೇಲಿದ್ದು ಸಮುದ್ರ ಮಟ್ಟದಿ೦ದ ಸರಾಸರಿ 300 ಮೀ ಇ೦ದ 750 ಮೀ. ಎತ್ತರದಲ್ಲಿದೆ. ಭಾರತದ ತೊಗರೆ ಕನಜ ಎಂದು ಪ್ರಸಿದ್ದ ವಾಗಿದೆ.
ಇತ್ತೀಚಿನ ಅಪ್ಡೇಟ್

ಗುಲ್ಬರ್ಗಾದ ಶರಣ ಬಸವೇಶ್ವರ ದೇವಸ್ತಾನ[X]