ಧಾರವಾಡ
DHARWAR
ಜಿಲ್ಲಾ ಪ್ರೊಫೈಲ್
ಸದಸ್ಯರು
ಕಛೇರಿ ಸ್ಥಳ
ಅಧಿಕಾರಿಗಳು
ಘಟನೆಗಳು
ಟೆಂಡರ್ ಗಳು
ಆರ್.ಟಿ.ಐ
ಸುತ್ತೋಲೆಗಳು
ಸಭಾ ನಡೆವಳಿಕೆಗಳು
ಪ್ರಗತಿ ಕಾಮಗಾರಿಗಳು
ಬಜೆಟ್
ಆಯ-ವ್ಯಯ ಪಟ್ಟಿ
ಪ್ರಗತಿ ವರದಿಗಳು
ಕ್ರಿಯಾ ಯೋಜನೆ
ಪೋಟೋ ಗ್ಯಾಲರಿ
ತಾಲ್ಲೂಕ ಪಂಚಾಯತಿಗಳು
Financial Year
Select Year
2015-16
2016-17
2017-18
2018-19
2019-20
2020-21
2021-22
ಜಿಲ್ಲೆಯ ಬಗ್ಗೆ
ಧಾರವಾಡ ಜಿಲ್ಲೆಯು ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಈ ಜಿಲ್ಲೆಯು 5ನೇ ಶತಮಾನದಲ್ಲಿ ಹಲವಾರು ರಾಜ ಮನೆತನಗಳಿಂದ ಆಳಲ್ಪಟ್ಟಿತ್ತು. ಈ ರಾಜ ವಂಶಗಳಲ್ಲಿ ಬಾದಾಮಿ ಚಾಲುಕ್ಯರನ್ನು ಒಳಗೊಂಡು ಪುಣೆಯ ಪೇಶ್ವೆಗಳವರೆಗೂ ಆಳಲ್ಪಟ್ಟಿರುತ್ತದೆ. ಪೇಶ್ವೆಗಳ ಆಳ್ವಿಕೆಯಿಂದ ಈ ಜಿಲ್ಲೆಯಲ್ಲಿ 19 ಶತಮಾನದವರೆಗೂ ಮರಾಠಿ ಪ್ರಾಭಲ್ಯವನ್ನು ಹೊಂದಿತ್ತು. ಮುಂದೆ ಬ್ರಿಟೀಷರ ಆಳ್ವಿಕೆಯಲ್ಲಿ ಧಾರವಾಡದ ವಿಭಾಗೀಯ ಶೈಕ್ಷಣಿಕ ಆಡಳಿತ ಕೇಂದ್ರವಾಗಿ ಮುಂದುವರೆದು ಕನ್ನಡ ಭಾಷೆಗೆ ತಮ್ಮ ಆಡಳಿತದಲ್ಲಿ ಪ್ರಥಮ ಆದ್ಯತೆಯನ್ನು ಕೊಟ್ಟಿದೆ. ಧಾರವಾಡ ಜಿಲ್ಲೆಯು ಹಿಂದೂ, ಇಸ್ಲಾಂ, ಜೈನ, ಕ್ರಿಶ್ಚಿಯನ್, ಸಿಖ್, ಬೌದ್ಧ ಮುಂತಾದ ಧರ್ಮದ ಜನಸಂಖ್ಯೆಯನ್ನು ಒಳಗೊಂಡಿದ್ದು ಹಿಂದೂ ಮತ್ತು ವೀರಶೈವ ಧರ್ಮೀಯರು ಬಹು ಸಂಖ್ಯಾತರಾಗಿದ್ದಾರೆ. ಈ ಜಿಲ್ಲೆಯು ಕೃಷಿಯನ್ನು ಉದ್ಯೋಗವನ್ನಾಗಿ ಹೊಂದಿದ್ದು, ಒಣ ಬೇಸಾಯವನ್ನು ನಂಬಿ ತಮ್ಮ ಜೀವನೋಪಾಯದ ಮೂಲ ಕಸಬನ್ನಾಗಿಸಿಕೊಂಡಿದ್ದಾರೆ. ಸರಾಸರಿ ಜನಸಂಖ್ಯೆಯಲ್ಲಿ ಕೆಲವೊಂದಿಷ್ಟು ಜನರು ಬೇರೆ ಬೇರೆ ಕೆಲಸದಲ್ಲಿ ತೊಡಗಿದ್ದಾರೆ. ಈ ಜಿಲ್ಲೆಯು ಧಾರವಾಡ ನಗರವನ್ನು ಕೇಂದ್ರವನ್ನಾಗಿ ಹೊಂದಿದು, 17 ತಾಲೂಕುಗಳನ್ನು ಒಳಗೊಂಡ ವಿಶಾಲವಾದ ಅಖಂಡ ಧಾರವಾಡ ಜಿಲ್ಲೆಯಾಗಿತ್ತು. ನಂತರ ಜಿಲ್ಲಾ ವಿಭಜನೆಯಿಂದಾಗಿ ಗದಗ, ಹಾವೇರಿ, ಧಾರವಾಡ ಜಿಲ್ಲೆಗಳಾಗಿ ಜನ್ಮತಾಳಿದವು. ಅದರಲ್ಲಿ ಧಾರವಾಡ ಜಿಲ್ಲೆಗೆ ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ ಹಾಗೂ ನವಲಗುಂದ ತಾಲೂಕುಗಳು ಸೇರ್ಪಡೆ ಆಗಿದ್ದು, ಅವುಗಳು ಐತಿಹಾಸಿಕ, ಸಂಸ್ಕೃತಿಕ,ಕಲಾತ್ಮಕ ಮತ್ತು ಸಾಹಿತ್ಯಿಕ ಸೇರಿದಂತೆ ವಿವಿಧ ಪರಂಪರೆಗಳನ್ನು ಹೊಂದಿವೆ.ಧಾರವಾಡ ಜಿಲ್ಲೆ ಉತ್ತರ ಕರ್ನಾಟಕದ ಪಶ್ಚಿಮ ಭಾಗದಲ್ಲಿದ್ದು ಜಿಲ್ಲೆಯ ವಿಸ್ತೀರ್ಣತೆ 4263 ಚ.ಕಿ.ಮೀ. ಇದ್ದು 15.51 ಉತ್ತರ ಅಕ್ಷಾಂಶ 73.43 ಮತ್ತು 75.25 ಪೂರ್ವ ರೇಖಾಂಶಗಳ ಮಧ್ಯದಲ್ಲಿದೆ. ಉತ್ತರಕ್ಕೆ ಬೆಳಗಾವಿ ದಕ್ಷಿಣಕ್ಕೆ ಹಾವೇರಿ ಪೂರ್ವಕ್ಕೆ ಗದಗ ಪಶ್ಚಿಮಕ್ಕೆ ಉತ್ತರ ಕನ್ನಡ ಜಿಲ್ಲೆಯು ಸಮುದ್ರ ಮಟ್ಟಕ್ಕಿಂತ 80 ಮಿಟರ ಎತ್ತರದಲ್ಲಿದ್ದು ಸಮಶೀತೋಷ್ಣ ಹವಾಗುಣವನ್ನು ಹೊಂದಿದೆ
ಇತ್ತೀಚಿನ ಅಪ್ಡೇಟ್
ZP Photo