ವಿಜಯಾಪುರ VIJAYAPURA
Financial Year   
ಜಿಲ್ಲೆಯ ಬಗ್ಗೆ
ವಿಜಾಪುರದ ಪುರಾತನ ಹೆಸರು ವಿಜಯಪುರ ,ಬಿಜ್ಜನಹಳ್ಳಿ. ಈ ಜಿಲ್ಲೆಯು ಐತಿಹಾಸಿಕ ಸ್ಥಳಗಳಿಂದ ಕೂಡಿದೆ. ೧೦-೧೧ ನೆ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರಿಂದ ಸ್ಥಾಪಿತವಾಯಿತು. ೧೩ ನೆ ಶತಮಾನದ ಕೊನೆಯ ಹೊತ್ತಿಗೆ ದೆಹಲಿಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಬಂದ ವಿಜಾಪುರ, ಕಿ. ಶ. ೧೩೪೭ ರಲ್ಲಿ ಬೀದರಿನ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾಯಿತು. ಕ್ರಿ. ಶ. ೧೫೧೮ ರಲ್ಲಿ ಬಹಮನಿ ಸುಲ್ತಾನೇಟ್ ಸಾಮ್ರಾಜ್ಯ ಒಡೆದು ಐದು ರಾಜ್ಯಗಳಾಗಿ ಹಂಚಿಹೋಯಿತು. ಆಗ ರೂಪುಗೊಂಡ ರಾಜ್ಯಗಳಲ್ಲಿ ವಿಜಾಪುರವೂ ಒಂದು. ಇದು ಆದಿಲ್ ಶಾಹಿ ಸುಲ್ತಾನರ ರಾಜ್ಯ. ಕ್ರಿ. ಶ. ೧೬೮೬ ರಲ್ಲಿ ಮುಘಲ್ ಸಾಮ್ರಾಜ್ಯದ ಔರಂಗಜೇಬ್ ಈ ಪ್ರದೇಶವನ್ನು ಗೆದ್ದ ನಂತರ ಆದಿಲ್ ಶಾಹಿ ಸುಲ್ತಾನರ ಆಳ್ವಿಕೆ ಕೊನೆಗೊಂಡಿತು. ಕ್ರಿ. ಶ. ೧೭೨೪ರಲ್ಲಿ ವಿಜಾಪುರ ಹೈದರಾಬಾದನ ನಿಜಾಮರ ಆಳ್ವಿಕೆಗೆ ಒಳಪಟ್ಟಿತು. ಕ್ರಿ. ಶ. ೧೭೬೦ ರಲ್ಲಿ ಮರಾಠರಿಂದ ನಿಜಾಮರು ಸೋಲಲ್ಪಟ್ಟಾಗ ವಿಜಾಪುರ ನಿಜಾಮರಿಂದ ಮರಾಠ ಪೇಶಾವರ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ಕ್ರಿ. ಶ. ೧೮೧೮ ರ ೩ ನೆ ಆಂಗ್ಲ-ಮರಾಠಾ ಯುದ್ದದಲ್ಲಿ ಬ್ರಿಟಿಷರಿಂದ ಮರಾಠರು ಸೋಲಲ್ಪಟ್ಟಾಗ ವಿಜಾಪುರ ಮರಾಠರಿಂದ ಬ್ರಿಟಿಷರ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ವಿಜಾಪುರನ್ನು ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಗೆ ಹಸ್ತಾಂತರಿಸಲಾಯಿತು. ಬಳಿಕ ಸಾತಾರಾ ರಾಜರಿಗೆ ಓಪ್ಪಿಸಲಾಯಿತು. ಕ್ರಿ. ಶ. ೧೮೪೮ ರಲ್ಲಿ ಸಾತಾರಾ ಮತ್ತು ವಿಜಾಪುರನ್ನು ಮುಂಬಯಿ ಪ್ರಾಂತ್ಯಕ್ಕೆ ಸೇರಿಸಲಾಯಿತು. ಬ್ರಿಟಿಷರಿಂದ ನಿರೂಪಿಸಲ್ಪಟ್ಟ ಕಲದಗಿ ಜಿಲ್ಲೆಗೆ ಈಗಿನ ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಸೇರಿಸಲ್ಪಟ್ಟವು. ಕ್ರಿ. ಶ. ೧೮೮೫ ರಲ್ಲಿ ವಿಜಾಪುರನ್ನು ಜಿಲ್ಲಾಡಳಿತ ಪ್ರದೇಶವಾಗಿ ಮಾಡಲಾಯಿತು ಮತ್ತು ವಿಜಾಪುರನ್ನು ಆಗಿನ ಮುಂಬಯಿ (ಬಾಂಬೆ) ರಾಜ್ಯಕ್ಕೆ ಸೇರಿಸಲಾಯಿತು. ತದನಂತರ ಕ್ರಿ.ಶ. ೧೯೫೬ ರಲ್ಲಿ ಆಗಿನ ಮೈಸೂರು ರಾಜ್ಯಕ್ಕೆ (ಈಗಿನ ಕರ್ನಾಟಕ ರಾಜ್ಯಕ್ಕೆ) ಸೇರಿಸಲಾಯಿತು. ವಿಜಾಪುರ ನಗರವು ಒಂದು ಕಾಲದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ನಗರವಾಗಿತ್ತು. ವಿಜಾಪುರ ಜಿಲ್ಲೆಯ ವಿಸ್ತೀರ್ಣ ೧೦೫೪೧ ಚದರ ಕಿಲೋಮಿಟರಗಳು.ವಿಜಾಪುರ ಜಿಲ್ಲೆಯು; ಗುಲ್ಬರ್ಗ ಜಿಲ್ಲೆ (ಪೂರ್ವಕ್ಕೆ), ರಾಯಚೂರು ಜಿಲ್ಲೆ (ದಕ್ಷಿಣಕ್ಕೆ), ಬಾಗಲಕೋಟೆ ಜಿಲ್ಲೆ (ದಕ್ಷಿಣ-ಪಶ್ಚಿಮಕ್ಕೆ), ಬೆಳಗಾವಿ ಜಿಲ್ಲೆ (ಪಶ್ಚಿಮಕ್ಕೆ), ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ(ಉತ್ತರ-ಪಶ್ಚಿಮಕ್ಕೆ) ಮತ್ತು ಮಹಾರಾಷ್ಟ್ರದ ಸೊಲಾಪುರ ಜಿಲ್ಲೆಯಿಂದ (ಉತ್ತರಕ್ಕೆ) ಆವೃತಗೊಂಡಿದೆ. ವಿಜಾಪುರ ಜಿಲ್ಲೆಯಲ್ಲಿ ಹರಿಯುವ ಎರಡು ಮುಖ್ಯ ನದಿಗಳೆಂದರೆ ಕೃಷ್ಣಾ ಮತ್ತು ಭೀಮಾ. ವಿಜಾಪುರ ಪಟ್ಟಣವು ಬೆಂಗಳೂರಿನಿಂದ ೫೩೫ ಕಿಮೀ, ಪುಣೆಯಿಂದ ೩೫೦ ಕಿಮೀ, ಮುಂಬಯಿದಿಂದ ೫೦೦ ಕಿಮೀ,ಹೈದರಾಬಾದ್ದಿಂದ ೩೮೦ ಕಿಮೀ,ಗೋವದಿಂದ ೩೧೦ ಕಿಮೀ, ಗುಲ್ಬರ್ಗಾದಿಂದ ೧೬೫ ಕಿಮೀ, ಧಾರವಾಡದಿಂದ ೨೦೦ ಕಿಮೀ,ಹುಬ್ಬಳ್ಳಿಯಿಂದ ೧೯೦ ಕಿಮೀ ಮತ್ತು ಬೆಳಗಾವಿಯಿಂದ ೨೧೦ ಕಿಮೀ ದೂರದಲ್ಲಿದೆ. ಈ ಜಿಲ್ಲೆಯು ಕರ್ನಾಟಕ ರಾಜ್ಯದ ೫.೪೯% ವಿಸ್ತೀರ್ಣವನ್ನು ಹೊಂದಿದೆ. ಈ ಜಿಲ್ಲೆಯು ಭೌಗೋಳಿಕದಲ್ಲಿ ೧೫(deg )೫೦(min) ಮತ್ತು ೧೭(deg) ೨೮(min) ಉತ್ತರ ಅಕ್ಷಾಂಶ ಮತ್ತು ೭೪(deg) ೫೪(min) ಮತ್ತು ೭೬(deg) ೨೮(min) ಪಶ್ಚಿಮ ರೇಖಾಂಶದಲ್ಲಿ ಬರುತ್ತದೆ. ಈ ಜಿಲ್ಲೆಯ ಜಿಲ್ಲಾಡಾಳಿತ ಕೇಂದ್ರ ಮತ್ತು ಪ್ರಮುಖ ಪಟ್ಟಣ ವಿಜಾಪುರ.
ಇತ್ತೀಚಿನ ಅಪ್ಡೇಟ್

ಜಿಲ್ಲಾ ಪಂಚಾಯತ ವಿಜಾಪುರ[X]