ಬೆಂಗಳೂರು ಗ್ರಾಮಾಂತರ
BENGALURU RURAL
ಜಿಲ್ಲಾ ಪ್ರೊಫೈಲ್
ಸದಸ್ಯರು
ಕಛೇರಿ ಸ್ಥಳ
ಅಧಿಕಾರಿಗಳು
ಘಟನೆಗಳು
ಟೆಂಡರ್ ಗಳು
ಆರ್.ಟಿ.ಐ
ಸುತ್ತೋಲೆಗಳು
ಸಭಾ ನಡೆವಳಿಕೆಗಳು
ಪ್ರಗತಿ ಕಾಮಗಾರಿಗಳು
ಬಜೆಟ್
ಆಯ-ವ್ಯಯ ಪಟ್ಟಿ
ಪ್ರಗತಿ ವರದಿಗಳು
ಕ್ರಿಯಾ ಯೋಜನೆ
ಪೋಟೋ ಗ್ಯಾಲರಿ
ತಾಲ್ಲೂಕ ಪಂಚಾಯತಿಗಳು
Financial Year
Select Year
2015-16
2016-17
2017-18
2018-19
2019-20
2020-21
2021-22
ಜಿಲ್ಲೆಯ ಬಗ್ಗೆ
ದಿನಾಂಕ:15.08.1986 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಬೆಂಗಳೂರು ಜಿಲ್ಲೆಯಿಂದ ವಿಭಾಗಗೊಂಡಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಕರ್ನಾಟಕ ರಾಜ್ಯದ ಆಗ್ನೇಯ ದಿಕ್ಕಿನಲ್ಲಿದೆ. ಈ ಜಿಲ್ಲೆಯು 12° 15’ ದಿಂದ 13° 35’ ಅಕ್ಷಾಂಶ ಮತ್ತು 77° 05’ ದಿಂದ 78° ರೇಖಾಂಶಗಳ ನಡುವೆ ಇರುತ್ತದೆ. ಭೂಮಿಯ ಮೇಲ್ಮೈ ಸಮುದ್ರ ಮಟ್ಟದಿಂದ 629 ರಿಂದ 950 ಮೀಟರ್ ವ್ಯತ್ಯಾಸದಲ್ಲಿರುತ್ತದೆ. ಈ ಜಿಲ್ಲೆಯ ಉತ್ತರ ದಿಕ್ಕಿನಲ್ಲಿ ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳು, ದಕ್ಷಿಣ ದಿಕ್ಕಿನಲ್ಲಿ ಬೆಂಗಳೂರು ನಗರ, ಪೂರ್ವ ದಿಕ್ಕಿನಲ್ಲಿ ಕೋಲಾರ ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ಹಾಗೂ ಪಶ್ಚಿಮ ದಿಕ್ಕಿನಲ್ಲಿ ತುಮಕೂರು ಮತ್ತು ರಾಮನಗರ ಜಿಲ್ಲೆಗಳಿವೆ. ಜಿಲ್ಲಯ ಭೂ ವಿಸ್ತಾರವು 5814 ಚ.ಕಿ.ಮೀಗಳಿದ್ದು, ರಾಜ್ಯದ ವಿಸ್ತೀರ್ಣದಲ್ಲಿ ಶೇ. 3.02 ರಷ್ಟು ಪ್ರದೇಶವನ್ನು ಹೊಂದಿದ್ದು, ರಾಜ್ಯದಲ್ಲಿ 16ನೇ ಸ್ಥಾನ ಪಡೆದಿದೆ. ಈ ಜಿಲ್ಲೆಯಲ್ಲಿ ಪಿನಾಕಿನಿ ಮತ್ತು ಅರ್ಕಾವತಿ ನದಿಗಳು ಹರಿಯುತ್ತವೆ. ರೇಷ್ಮೆ, ಹಾಲು, ಹೂವು, ತರಕಾರಿ ಮತ್ತು ಕೈಮಗ್ಗದ ಚಟುವಟಿಕೆಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಪ್ರಸಿದ್ಧವಾಗಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನ, ನೆಲಮಂಗಲ ತಾಲ್ಲೂಕಿನಲ್ಲಿರುವ ಶಿವಗಂಗೆ ಬೆಟ್ಟ, ವಿಜಯ ವಿಠ್ಠಲ ದೇವಸ್ಥಾನ, ದೇವನಹಳ್ಳಿ ತಾಲ್ಲೂಕಿನಲ್ಲಿರುವ ಟಿಪ್ಪು ಸುಲ್ತಾನ ಕೋಟೆ, ದೇವನಹಳ್ಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇವುಗಳು ಪ್ರೇಕ್ಷಣೀಯ ಸ್ಥಳಗಳಾಗಿವೆ.
ಇತ್ತೀಚಿನ ಅಪ್ಡೇಟ್
Ghati subramanya, Doddaballapur Taluk