ಬೆಂಗಳೂರು BENGALURU
Financial Year   
ಜಿಲ್ಲೆಯ ಬಗ್ಗೆ
ಬೆಂಗಳೂರು ನಗರವು ಕರ್ನಾಟಕ ರಾಜ್ಯದ ರಾಜಧಾನಿ. ಇದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಇದನ್ನು ಕ್ರಿ.ಶ.1537ರಲ್ಲಿ ಶ್ರೀ ಕೆಂಪೇಗೌಡ ಇವರು ನಿರ್ಮಿಸಿರುತ್ತಾರೆ. ಶ್ರೀ ಕೆಂಪೇಗೌಡ ಇವರು ನಾಲ್ಕು ದಿಕ್ಕುಗಳಿಗೆ ನಿರ್ಮಿಸಿದ್ದ ಗೋಪುರಗಳನ್ನು ಮೀರಿ ನಗರವು ಅಗಾಧವಾಗಿ ಬೆಳೆದಿರುತ್ತದೆ. ಏಷ್ಯಾ ಖಂಡದಲ್ಲಿ ಬೆಂಗಳೂರು ನಗರವು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ರಾಜಧಾನಿ ಎನಿಸಿದೆ. 11ನೇ ಶತಮಾನದ ಹೊಯ್ಸಳ ರಾಜನಾದ ವೀರಬಲ್ಲಾಳ II ನು ಭೇಟೆ ಸಂದರ್ಭದಲ್ಲಿ ಕಾಡಿನಲ್ಲಿ ದಾರಿತಪ್ಪಿ, ಹಸಿವು ಮತ್ತು ಬಾಯಾರಿಕೆಯಿಂದ ಬಳಲುವಾಗ ಓರ್ವ ಬಡ ಮುದುಕಿಯು ಬೇಯಿಸಿದ ಕಾಳನ್ನು ನೀಡಿ ಉಪಚರಿಸಿರುತ್ತಾಳೆ. ಆ ರಾಜನು ಇದರ ನೆನಪಿಗೆ ಆ ಸ್ಥಳವನ್ನು "ಬೆಂದ-ಕಾಳು-ಊರು" ಎಂದು ಕರೆದಿರುತ್ತಾನೆ. ನಂತರ ಶ್ರೀ ಕೆಂಪೇಗೌಡ ಇವರು ಈ ಪ್ರದೇಶವನ್ನು "ಗಂಡು-ಭೂಮಿ" ಎಂದು ಕರೆದರು. ಬೆಂಗಳೂರು ಜಿಲ್ಲೆಯು 1986 ರಲ್ಲಿ ವಿಭಜೆನಗೊಂಡು ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಾಗಿ ರಚನೆಗೊಂಡಿರುತ್ತದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಆನೇಕಲ್, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಪೂರ್ವ ನಾಲ್ಕು ತಾಲ್ಲೂಕು ಪಂಚಾಯಿತಿಗಳಿರುತ್ತದೆ. ಇವುಗಳಲ್ಲಿ 17 ಹೋಬಳಿ, 86 ಗ್ರಾಮ ಪಂಚಾಯಿತಿಗಳು ಮತ್ತು 699 ಗ್ರಾಮಗಳನ್ನು ಒಳಗೊಂಡಿರುತ್ತವೆ. ಬೆಂಗಳೂರು ನಗರವು ಉತ್ತರಕ್ಕೆ 12.97° ಮತ್ತು ಪೂರ್ವಕ್ಕೆ 77.56° ರಲ್ಲಿ ಕೇಂದ್ರದಲ್ಲಿದೆ. ಈಶಾನ್ಯ ದಿಕ್ಕಿನಲ್ಲಿ ಕೋಲಾರ ಜಿಲ್ಲೆಯು, ವಾಯುವ್ಯ ದಿಕ್ಕಿನಲ್ಲಿ ತುಮಕೂರು ಜಿಲ್ಲೆಯು, ನೈರುತ್ಯ ದಿಕ್ಕಿನಲ್ಲಿ ರಾಮನಗರ ಜಿಲ್ಲೆಯು ಮತ್ತು ಆಗ್ನೇಯ ದಿಕ್ಕಿನಲ್ಲಿ ತಮಿಳುನಾಡು ರಾಜ್ಯ ಗಡಿ ಹೊಂದಿರುತ್ತದೆ. ಜಿಲ್ಲೆಯ ಭೌಗೋಳಿಕ ವಿಸ್ತೀರ್ಣವು 2208 ಚದರ ಕಿ.ಮೀ. ಹೊಂದಿದ್ದು, 2011ನೇ ಜನಗಣತಿ ಪ್ರಕಾರ ಜನಸಂಖ್ಯೆಯು 65.37 ಲಕ್ಷಗಳಿದೆ. 23.94 ಲಕ್ಷ ಕುಟುಂಬಗಳಿದ್ದು, ಅವುಗಳಲ್ಲಿ 2.13 ಲಕ್ಷ ಗ್ರಾಮೀಣ ಕುಟುಂಬಗಳಿರುತ್ತದೆ. ಜಿಲ್ಲೆಯಲ್ಲಿ ಸಾಮಾನ್ಯ ಮಳೆ ಪ್ರಮಾಣವು 896 ಮಿ.ಮಿ. ಗಳಷ್ಟಿದ್ದು, 2012ರಲ್ಲಿ 586 ಮಿ.ಮಿ. ಮಳೆಯಾಗಿರುತ್ತದೆ. ಜಿಲ್ಲೆಯ ಪ್ರಮುಖ ಬೆಳೆಯು ರಾಗಿ ಆಗಿರುತ್ತದೆ.
ಇತ್ತೀಚಿನ ಅಪ್ಡೇಟ್

ಜಿಲ್ಲಾ ಪಂಚಾಯಿತಿ[X]